ಸರಳ ಸಂಸ್ಕೃತ ವ್ಯಾಕರಣ
Tuesday, 3 July 2012
ಸ್ವರ ಸಂಧಿಯ ಪ್ರಕಾರಗಳು:
ಸ್ವರ ಸಂಧಿಯ ಪ್ರಕಾರಗಳು:
1) ಸವರ್ಣ ಧೀರ್ಘ ಸಂಧಿ
ಸೂತ್ರ : अकः सवर्णे दीर्घः
ಸೂತ್ರಾರ್ಥ : अक् ಪ್ರತ್ಯಾಹಾರವಾದ अ इ उ ऋ लृ ವರ್ಣಗಳ ಮುಂದೆ ಸವರ್ಣಾಕ್ಷರಗಳು ಅಂದ್ರೆ ಅದೇ ಅಕ್ಷರಗಳು ಬಂದು ಸಂಧಿಯಾಗುವಾಗ ಆ ವರ್ಣಗಳು ದೀರ್ಘಾಕ್ಷರಗಳಾಗಿ ಪರಿವರ್ತಣೆಗೊಳ್ಳುತ್ತದೆ... ಅದರ ಸಂಕ್ಷಿಪ್ತ ಸರಳ ರೂಪವನ್ನ ಕಳಗೆ ಕೊಟ್ಟಿದೆ..
अ,आ अ,आ = आ
इ,ई इ ई = ई
उ,ऊ उ,ऊ = ऊ
ऋ ऋ = ऋ
लृ लृ = लृ
ಅ, ಆ ಕಾರಗಳಿಗೆ ಅ ಆ ಕಾರಗಳು ಬಂದಾಗ ಆ ಕಾರವೂ, ಇ ಈ ಕಾರಗಳಿಗೆ ಇ ಈ ಕಾರವೂ ಬಂದಾಗ ಈ ಕಾರವೂ, ಮತ್ತು ಉ ಊ ಕಾರಗಳಿಗೆ ಉ ಊ ಕಾರಗಳು ಬಂದಾಗ ಊ ಕಾರವೂ, ಋ ಕಾರಕ್ಕೆ ಋ ಕಾರವು ಬಂದಾಗ ದೀರ್ಘ ಋ ಕಾರವು ಹಾಗೂ ಲೃ ಕಾರಕ್ಕೆ ಲೃ ಕಾರವು ಬಂದಾಗ ದೀರ್ಘ ಲೃ ಕಾರವು ಬರುವುದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುತ್ತಾರೆ..
ಉದಾ :
देव आलाय देवालय
विद्या आलय = विद्यालय
गौरी ईशः = गोरीशः
कवि ईश्वर = कवीश्वर
बहु उपकारः = बहूपकारः
होतृ लृकारः = होतृकारः
मातृ ऋणम् = मातृणम्
ಇದೇ ಸಂಧಿಯ ಇತರ ಉದಾಹರಣೆ ಪದಗಳು
भानूदय सूक्त्ति
मंत्रालय दिव्याभरण सूर्यास्त गिरीश गुरूपदेश वधूपदेश ಇತ್ಯಾದಿ
Sunday, 1 July 2012
ಸಂಧಿಗಳಲ್ಲಿ ಪ್ರಮುಖವಾದವು ಮೂರು: ೧)ಸ್ವರ ಸಂಧಿ ೨) ವ್ಯಂಜನ ಸಂಧಿ ಮತ್ತು ೩)ವಿಸರ್ಗ ಸಂಧಿ. ಇವುಗಳಲ್ಲದೆ ಪ್ರಕೃತಿಭಾವ ಸಂಧಿ ಮತ್ತು ಸ್ವಾದಿ ಸಂಧಿ ಎಂಬ ಎರಡು ಪ್ರಕಾರಗಳೂ ಇವೆ. ಪ್ರಕೃತಿಭಾವ ಸಂಧಿಯಲ್ಲಿ ಯಾವ ವರ್ಣವೂ ಬದಲಾಗುವುದಿಲ್ಲ. ಆದರೂ ಇಲ್ಲಿ ಸ್ವರದ ಮುಂದೆ ಸ್ವರವು ಬರುವುದರಿಂದ ಇದನ್ನು ಸ್ವರ ಸಂಧಿಯ ಭೇದವನ್ನಾಗಿ ಪರಿಗನಿಸುತ್ತಾರೆ.
ಸ್ವರ(अच्)ಸಂಧಿಯ ವಿಧಗಳು:
1)सवर्णदीर्घ संधिः
2)गुण
3)वृद्धि
4)यण्
5)यान्तादेश
6)वान्तादेश
7)पूर्वरूप
8)पररूप
9)अवङादेश
10)प्रकृतिभाव
ವ್ಯಂಜನ (हल्)ಸಂಧಿಯ ವಿಧಗಳು:
1)श्चुत्व संधिः
2)ष्टुत्व
3)जश्त्व
4)अनुनासिक
5)अनुस्वार
6)परसवर्ण
7)पूर्वसवर्ण
8)छत्व
Tuesday, 24 January 2012
ಸಂಧಿಗಳು
ಎರಡು ವರ್ಣಗಳು ಪರಸ್ಪರ ಕೂಡಿದಾಗ ಉಂಟಾಗುವ ಬದಲಾವಣೆಗೆ 'ಸಂಧಿ' ಎನ್ನುತ್ತಾರೆ. ಉದಾ: देव+आलयः=देवालयः। ಇಲ್ಲಿ देव ಶಬ್ದದ ಕೊನೆಯ अ ಕಾರ ಮತ್ತು आलयः ಶಬ್ದದ ಮೊದಲನೆಯ आ ಕಾರವು ಪರಸ್ಪರ ಸಂಯೋಗಗೊಂಡು आ ಕಾರವಾಗಿ देवालयः ಎಂದಾಗಿದೆ.
ಇಂತಹ ಸಂಧಿಗಳಲ್ಲಿ ಮುಖ್ಯವಾಗಿ ೫ ಬಗೆಗಳಿವೆ. ಅವುಗಳೆಂದರೆ
೧)ಸ್ವರ+ಸ್ವರ-ಅ+ಆ=ದೇವ+ಆಲಯ
೨)ಸ್ವರ+ವ್ಯಂಜನ-ಅ+ನ್=ಶಿವಾಯ+ನಮಃ
೩)ವ್ಯಂಜನ+ಸ್ವರ-ಕ್+ಈ=ವಾಕ್+ಈಶ=ವಾಗೀಶ
೪)ವಿಸರ್ಗ+ಸ್ವರ- : + ಅ=ರಾಮಃ+ಅಪಿ
೫)ವಿಸರ್ಗ+ವ್ಯಂಜನ- : +ಗ್=ರಾಮಃ+ಗುರು
ಸಂಧಿಯಾದಾಗ ಯಾವುದೇ ಬದಲಾವಣೆ ಆಗದಿದ್ದರೆ ಅದನ್ನು ವಿಶೇಷವೆಂದು ತಿಳಿಯುವುದಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗುತ್ತವೆಯೋ ಅವುಗಳನ್ನು ಗಮನಿಸಲಾಗುವುದು. ಯಾವುದೇ ಸಂಧಿಯನ್ನು ತಿಳಿಯಲು ನಾವು ೪ ವಿಷಯಗಳನ್ನು ಗಮನಿಸಬೇಕು. ಅವೆಂದರೇ,
೧)ಸಂಧಿ ಕಾರ್ಯ= ಸಂಧಿಯಾದಾಗ ಆಗುವ ಬದಲಾವಣೆಯನ್ನು ಸಂಧಿಕಾರ್ಯ ಎನ್ನುತ್ತಾರೆ. ಇದರಲ್ಲಿ ೪ ವಿದಗಳಿವೆ.
a)ಲೋಪ=ಸಂಧಿಯಾದಾಗ ಒಂದು ಅಕ್ಷರ ಕಾಣೆಯಾಗುವಿಕೆ.
b)ಆಗಮ=ಸಂಧಿಯಾಗುವಾಗ ಒಂದು ಅಕ್ಷರ ಆಗಮಿಸುವುದು.
c)ಆದೇಶ=ಸಂಧಿಯಾದಾಗ ಒಂದು ಅಕ್ಷರ ಹೋಗಿ ಇನ್ನೊಂದು ಅಕ್ಷರ ಬರುವುದು(ಆದೇಶಿಸುವುದು)
d)ಏಕಾದೇಶ=ಸಂಧಿಯಾದಾಗ ೨ ಸ್ವರಗಳು ಸೇರಿ ಒಂದು ಸ್ವರವಾಗುವುದು.
೨)ಸಂಧಿ ನಿಯಮ=ಸಂಧಿಯಾದಾಗ ಎಲ್ಲಿ ಬದಲಾವಣೆಗಳು ಆಗುತ್ತವೆಯೆಂದು ತಿಳಿಸುವುದನ್ನು ಸಂಧಿನಿಯಮ ಎನ್ನುವರು.
೩)ಸಂಧಿ ಉದಾಹರಣೆ=ಸಂಧಿ ಎಲ್ಲಿಯಾಗಿದೆಯೆಂದು ಪದಗಳಿಂದ ತೋರಿಸುವುದು.
೪)ಸಂಧಿ ಚಿಹ್ನೆ=ಸಂಧಿಯಾಗಿರುವ ಸ್ಥಳವನ್ನು ಬಿಡಿಸಿ ಬರೆಯುವಾಗ + ಕೂಡಿಸು ಚಿಹ್ನೆಯಿಂದ ಗುರುತಿಸುತ್ತಾರೆ.
Monday, 14 November 2011
ವರ್ಣಮಾಲೆಗಳ ವಿಂಗಡಣೆಗಳು
ಈಗಾಗಲೇ ತಿಳಿಸಿದ ವರ್ಗೀಯ ವ್ಯಂಜನಗಳಲ್ಲಿ ಪ್ರತಿವರ್ಗದಲ್ಲಿಯ ಮೊದಲಿನ ೨ ವ್ಯಂಜನಗಳು 'ಕರ್ಕಶ' ವ್ಯಂಜನಗಳು(खर् ವರ್ಣಗಳು) ಹಾಗೂ ಕೊನೆಯ ೩ ವ್ಯಂಜನಗಳು ಮೃದು ವ್ಯಂಜನಗಳು(हश् ವರ್ಣಗಳು). ಅವರ್ಗೀಯ ವ್ಯಂಜನಗಳಲ್ಲಿ श् ष् स् ಗಳು ಕರ್ಕಶ ವ್ಯಂಜನಗಳು, ಉಳಿದವುಗಳು ಮೃದು ವ್ಯಂಜನಗಳು. ಹಾಗೆಯೇ ಪ್ರತಿಯೊಂದು ವರ್ಗದ ಮೊದಲನೆಯ, ಮೂರನೆಯ ಮತ್ತು ಐದನೆಯ ವ್ಯಂಜನಗಳು ಹಾಗೂय् र् ल् व् ಗಳೂ ಅಲ್ಪಪ್ರಾಣಗಳು. ಉಳಿದೆಲ್ಲವುಗಳು ಮಹಾಪ್ರಾಣಗಳು. ಪ್ರತಿಯೊಂದು ವರ್ಗದ ಕೊನೆಯ ವ್ಯಂಜನವು (ङ् ञ् ण् न् म्) ಅನುನಾಸಿಕಗಳು.ಈ ವರ್ಣಗಳು ಮೂಗು ಮತ್ತು ಕಂಠಾದಿಸ್ಥಾನಗಳಿಂದ ಉಚ್ಚಾರಿಸಲ್ಪಡುತ್ತದೆ.
अम् ಎಂಬುವುದು 'ಅನುಸ್ವಾರ'. ಇದರ ಚಿಹ್ನೆ ವರ್ಣದ ಮೇಲೆ ಕೊಡುವ ಬಿಂದು.अः ಎಂಬುವುದು ವಿಸರ್ಗ. ಇದರ ಚಿಹ್ನೆ ವರ್ಣದ ಮುಂದೆ ಕೊಡುವ ಎರಡು ಬಿಂದುಗಳು. ವಿಸರ್ಗವು क् ख् ಗಳ ಮತ್ತು प् फ् ಗಳ ಹಿಂದೆ ಬಂದಾಗ '೧' ಅಕ್ಷರವನ್ನು ಕೆಲಗೊಂದು ಅದರ ಮೇಲೆ ಅದೇ ಅಕ್ಷರವನ್ನು ಉಲ್ಟಪಲ್ಟ ಮಾಡಿ ಇಟ್ಟ ಚಿಹ್ನೆಯನ್ನು ಪಡೆಯುತ್ತದೆ. क् ख् ಗಳ ಹಿಂದಿನ ಅರ್ಧ ವಿಸರ್ಗಕ್ಕೆ ಜಿಹ್ವಮೂಲಿಯವೆಂದೂ, प् फ्ಗಳ ಹಿಂದಿನದಕ್ಕೆ ಉಪಧ್ಮಾನೀಯವೆಂದೂ ಹೆಸರಿಸಿದ್ದಾರೆ
Monday, 10 October 2011
ವ್ಯಂಜನಗಳು-हल् अक्षरानि
ಈಗಾಗಲೇ ಹೇಳಿದ ಮಾಹೇಶ್ವರ ಸೂತ್ರಗಳಲ್ಲಿ ಐದನೆಯ ಸೂತ್ರದಿಂದ ಕೊನೆಯ ಸೂತ್ರದವರೆಗಿನ ಎಲ್ಲಾ ಅಕ್ಷರಗಳನ್ನು('इत्'ಗಳನ್ನು ಹೊರತುಪಡಿಸಿ) ವ್ಯಂಜನಗಳು ಎಂದು ಕರೆಯಲಾಗಿದೆ. ಅವುಗಳನ್ನು ಈ ರೀತಿ ನಮೂದಿಸಬಹುದು.
१) क् ख् ग् घ् ङ्.२) च् छ् ज् झ् ञ्.
३) ट् ठ् ड् ढ् ण्.
४) त् थ् द् ध् न्.
५)प् फ् ब् भ् म्.
६)य् र् ल् व् श् ष् स् ह् ल्.
ಹೀಗೆ ಒಟ್ಟಿಗೆ ೩೩ ವ್ಯಂಜನಗಳು. ಇವುಗಳಲ್ಲಿ क् ದಿಂದ म् ವರೆಗಿನವು ವರ್ಗೀಯ ವ್ಯಂಜನಗಳು. ಇವುಗಳನ್ನು ಉಚ್ಚರಿಸುವಾಗ ಅಗತ್ಯವಿರುವ ಸ್ಥಾನಕ್ಕೆ ಅನುಸರಿಸಿ ವರ್ಗೀಯ ವ್ಯಂಜನಗಳನ್ನು ಐದು ವಿಧಗಳನ್ನಾಗಿ ವಿಂಗಡಿಸಿಇದ್ದಾರೆ.
१) क् ವರ್ಗ (क् ख् ग् घ् ङ्)- ಇವು ಕಂಠ್ಯ: ಎಂದರೆ, ಇವುಗಳ ಉಚ್ಚಾರದ ಸ್ಥಾನ ಕಂಠ.
२) च् ವರ್ಗ (च् छ् ज् झ् ञ्)- ಇವು ತಾಲವ್ಯ ಅಂದರೆ, ಇವುಗಳ ಉಚ್ಚಾರದ ಸ್ಥಾನ ತಾಲು ಪ್ರದೇಶ.
३) ट् ವರ್ಗ (ट् ठ् ड् ढ् ण्)- ಇವು ಮೂರ್ಧನ್ಯ, ಅಂದರೆ ಇವುಗಳನ್ನು ಉಚ್ಚರಿಸುವಾಗ ಮೂರ್ಧಾದ ಮೇಲೆ ಒತ್ತಡ ಬೀಳಬೇಕಾಗುತ್ತದೆ.४) त्ವರ್ಗ (त् थ् द् ध् न्)- ಇವು ದಂತ್ಯ, ಎಂದರೆ ಇವುಗಳನ್ನು ಉಚ್ಚರಿಸುವಾಗ ನಾಲಗೆ ಹಲ್ಲುಗಳಿಗೆ ತಗಲಬೇಕಾಗುತ್ತದೆ.
५)प्ವರ್ಗ (प् फ् ब् भ् म्)-ಇವು ಓಷ್ಟ, ಅಂದರೆ ಇವುಗಳನ್ನು ಉಚ್ಚರಿಸುವಾಗ ತುಟಿಗಳು ಒಂದಕ್ಕೊಂದು ತಗಲುತ್ತವೆ.
ಉಳಿದವುಗಳನ್ನು ಅವರ್ಗೀಯ ವ್ಯಂಜನಗಳೆಂದು ವಿಂಗಡಿಸಲಾಗಿದೆ. ಅವುಗಳಲ್ಲಿ य् र् ल् व्ಗಳನ್ನು ಅಂತಸ್ಥ ವರ್ಣಗಳೆಂದೂ श् ष् स् ह् ಗಳನ್ನು ಊಷ್ಮ ವರ್ಣಗಳೆಂದೂ ಗುರುತಿಸಲಾಗಿದೆ.
Sunday, 25 September 2011
ಸ್ವರಾಕ್ಷರಗಳು-स्वराक्षरानि
अ आ इ ई उ ऊ ऋ (*) लृ ए ऐ ओ औ ಗಳು ಒಟ್ಟಿಗೆ ೧೩ ಸ್ವರಾಕ್ಷರಗಳು. ಅವುಗಳಲ್ಲಿअ इ उ ऋ लृ ಗಳು ಹೃಸ್ವ ಸ್ವರಗಳು. ಇನ್ನುಳಿದ ೮ ದೀರ್ಘ ಸ್ವರಗಳು(+1). ಇವುಗಳಲ್ಲಿ ए ऐ ओ औ ಗಳನ್ನು 'ಸಂಯುಕ್ತ ಸ್ವರ' ಗಳೆಂದು(+2) ಕರೆಯುತ್ತಾರೆ.
(*) ದೀರ್ಘ ಋ ಕಾರವು ನನ್ನ ಬರಹದಲ್ಲಿ ಸದ್ಯಕ್ಕೆ ಲಭ್ಯವಿಲ್ಲದಿರುವುದರಿಂದ ಬರೆಯಲಾಗಲಿಲ್ಲ.
(+1) ಬೇರೆ ಬೇರೆ ಸ್ವರಗಳನ್ನು ಉಚ್ಚರಿಸಲು ಬೇಕಾಗುವ ಕಾಲಮಿತಿ ಬೇರೆ ಬೇರೆಯೆಂದು ಪ್ರತಿಯೊಬ್ಬರ ಅನುಭವ. ಇದಕ್ಕನುಗುಣವಾಗಿ ಸ್ವರಗಳನ್ನು ಹ್ರಸ್ವ, ದೀರ್ಘ, ಪ್ಲುತ ಗಳೆಂದು ವಿಂಗಡಿಸಲಾಗಿದೆ.
ಒಂದು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರವನ್ನು ಹ್ರಸ್ವವೆಂದು(अ), ಎರಡು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರಗಳನ್ನು ದೀರ್ಘವೆಂದು(आ) ಹಾಗೂ ಮೂರು ಅಥವಾ ಅದ್ಕಿಂತ ಹೆಚ್ಚು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರಗಳನ್ನು ಪ್ಲುತ ಸ್ವರಗಳೆಂದು(आऽ ) ವಿಂಗಡಿಸಲಾಗಿದೆ.
(+2) ಸಂಯುಕ್ತ ಸ್ವರ ಸಂಧ್ಯಾಕ್ಷರ ಎಂದರೆ ಎರಡು ಸ್ವರ ಅಥವಾ ಅಕ್ಷರಗಳು ಕೂಡಿ ಆದ ಸ್ವರ ಅಥವಾ ಅಕ್ಷರ.
ಉದಾಹರಣೆಗೆ, ए= अ+इ(ई), ओ= अ+उ, औ=अ+ओ
Saturday, 10 September 2011
'प्रत्याहार-ಪ್ರತ್ಯಾಹಾರ'
प्रत्याहार : ಮಾಹೇಶ್ವರ ಸೂತ್ರಗಳನ್ನು ಸಂಕ್ಷಿಪ್ತಗೊಳಿಸಿ ಹೇಳುವುದಕ್ಕೆ 'ಪ್ರತ್ಯಾಹಾರ' ಎನ್ನುತ್ತೇವೆ. ಇದು ವ್ಯಾಕರಣದ ಪ್ರತೀ ಭಾಗದಲ್ಲೂ ಯಥೇಚ್ಛವಾಗಿ ಕಂಡುಬರುತ್ತದೆ
ಉದಾಹರಣೆಗೆ : अच् , हल्, अण्, यष् etc.
ಅಂದರೆ, अच् ಎಂದರೆ ಸ್ವರ ಎಂದರ್ಥ. ಆದರೆ ಇದೊಂದು ಪ್ರತ್ಯಾಹಾರವಾಗಿದೆ. ಈ ಪ್ರತ್ಯಾಹಾರವು ಎಲ್ಲಾ ಸ್ವರಗಳನ್ನು ಒಂದುಗೂಡಿಸುತ್ತದೆ. ಅಂದರೆ ಇದರಲ್ಲಿ ಮಾಹೇಶ್ವರ ಸೂತ್ರದ ಮೊದಲನೆ अ ದಿಂದ ಹಿಡಿದು ನಾಲ್ಕನೇ ಸೂತ್ರದ च् ವರೆಗಿನ(अ इ उ ऋ लृ ए ओ ऐ औ) ಎಲ್ಲಾ ಸ್ವರಗಳು ಒಳಗೊಂಡಿದೆ. ಆದರೆ ಪ್ರತೀ ಸೂತ್ರದ ಕೊನೆಯ ಅಕ್ಷರಗಳು इत् ಗಳಾಗಿರುವುದರಿಂದ ಇಲ್ಲಿ ಬಳಕೆಗೆ ಬಂದಿಲ್ಲ.
* 'हलन्त्यम्
ಸೂತ್ರದ ವೃತ್ತಿ(उपदेशे अन्त्यम् हल् इत् स्यात्)ಯ ಪ್ರಕಾರ ಪ್ರತೀ ಸೂತ್ರದ ಕೊನೇಯ ಎಲ್ಲಾ ವ್ಯಂಜನಗಳು इत् ಗಳಾಗಿವೆ. ಇಲ್ಲಿ हल् ಎಂದರೆ ವ್ಯಂಜನ ಎಂದರ್ಥ. ಆದರೆ ಇದೊಂದು ಪ್ರತ್ಯಾಹಾರವೂ ಹೌದು
* उपदेशः ಅಂದರೆ ಮಾಹೇಶ್ವರ ಸೂತ್ರಗಳನ್ನು
उपदेशः ಎಂತಲೂ ಕರೆಯುತ್ತಾರೆ
* 'हलन्त्यम्' ಎಂದರೆ
'हल + अन्त्यम्' ಅಂದರೆ ಮಾಹೇಶ್ವರ ಸೂತ್ರದ ಕೊನೇಯ ಎಲ್ಲಾ ವ್ಯಂಜನಗಳು ಎಂದರ್ಥ.
Subscribe to:
Comments (Atom)