ಇಲ್ಲ ಹುಡುಕಿ

Saturday, 10 September 2011

'प्रत्याहार-ಪ್ರತ್ಯಾಹಾರ'

प्रत्याहार : ಮಾಹೇಶ್ವರ ಸೂತ್ರಗಳನ್ನು ಸಂಕ್ಷಿಪ್ತಗೊಳಿಸಿ ಹೇಳುವುದಕ್ಕೆ 'ಪ್ರತ್ಯಾಹಾರ' ಎನ್ನುತ್ತೇವೆ. ಇದು ವ್ಯಾಕರಣದ ಪ್ರತೀ ಭಾಗದಲ್ಲೂ ಯಥೇಚ್ಛವಾಗಿ ಕಂಡುಬರುತ್ತದೆ ಉದಾಹರಣೆಗೆ : अच् , हल्, अण्, यष् etc. ಅಂದರೆ, अच् ಎಂದರೆ ಸ್ವರ ಎಂದರ್ಥ. ಆದರೆ ಇದೊಂದು ಪ್ರತ್ಯಾಹಾರವಾಗಿದೆ. ಈ ಪ್ರತ್ಯಾಹಾರವು ಎಲ್ಲಾ ಸ್ವರಗಳನ್ನು ಒಂದುಗೂಡಿಸುತ್ತದೆ. ಅಂದರೆ ಇದರಲ್ಲಿ ಮಾಹೇಶ್ವರ ಸೂತ್ರದ ಮೊದಲನೆ अ ದಿಂದ ಹಿಡಿದು ನಾಲ್ಕನೇ ಸೂತ್ರದ च् ವರೆಗಿನ(अ इ उ ऋ लृ ए ओ ऐ औ) ಎಲ್ಲಾ ಸ್ವರಗಳು ಒಳಗೊಂಡಿದೆ. ಆದರೆ ಪ್ರತೀ ಸೂತ್ರದ ಕೊನೆಯ ಅಕ್ಷರಗಳು इत् ಗಳಾಗಿರುವುದರಿಂದ ಇಲ್ಲಿ ಬಳಕೆಗೆ ಬಂದಿಲ್ಲ. * 'हलन्त्यम् ಸೂತ್ರದ ವೃತ್ತಿ(उपदेशे अन्त्यम् हल् इत् स्यात्)ಯ ಪ್ರಕಾರ ಪ್ರತೀ ಸೂತ್ರದ ಕೊನೇಯ ಎಲ್ಲಾ ವ್ಯಂಜನಗಳು इत् ಗಳಾಗಿವೆ. ಇಲ್ಲಿ हल् ಎಂದರೆ ವ್ಯಂಜನ ಎಂದರ್ಥ. ಆದರೆ ಇದೊಂದು ಪ್ರತ್ಯಾಹಾರವೂ ಹೌದು * उपदेशः ಅಂದರೆ ಮಾಹೇಶ್ವರ ಸೂತ್ರಗಳನ್ನು उपदेशः ಎಂತಲೂ ಕರೆಯುತ್ತಾರೆ * 'हलन्त्यम्' ಎಂದರೆ 'हल + अन्त्यम्' ಅಂದರೆ ಮಾಹೇಶ್ವರ ಸೂತ್ರದ ಕೊನೇಯ ಎಲ್ಲಾ ವ್ಯಂಜನಗಳು ಎಂದರ್ಥ.

No comments:

Post a Comment