ಇಲ್ಲ ಹುಡುಕಿ

Tuesday, 3 July 2012

ಸ್ವರ ಸಂಧಿಯ ಪ್ರಕಾರಗಳು:

ಸ್ವರ ಸಂಧಿಯ ಪ್ರಕಾರಗಳು: 1) ಸವರ್ಣ ಧೀರ್ಘ ಸಂಧಿ ಸೂತ್ರ : अकः सवर्णे दीर्घः ಸೂತ್ರಾರ್ಥ : अक् ಪ್ರತ್ಯಾಹಾರವಾದ अ इ उ ऋ लृ ವರ್ಣಗಳ ಮುಂದೆ ಸವರ್ಣಾಕ್ಷರಗಳು ಅಂದ್ರೆ ಅದೇ ಅಕ್ಷರಗಳು ಬಂದು ಸಂಧಿಯಾಗುವಾಗ ಆ ವರ್ಣಗಳು ದೀರ್ಘಾಕ್ಷರಗಳಾಗಿ ಪರಿವರ್ತಣೆಗೊಳ್ಳುತ್ತದೆ... ಅದರ ಸಂಕ್ಷಿಪ್ತ ಸರಳ ರೂಪವನ್ನ ಕಳಗೆ ಕೊಟ್ಟಿದೆ.. अ,आ अ,आ = आ इ,ई इ ई = ई उ,ऊ उ,ऊ = ऊ ऋ ऋ = ऋ लृ लृ = लृ ಅ, ಆ ಕಾರಗಳಿಗೆ ಅ ಆ ಕಾರಗಳು ಬಂದಾಗ ಆ ಕಾರವೂ, ಇ ಈ ಕಾರಗಳಿಗೆ ಇ ಈ ಕಾರವೂ ಬಂದಾಗ ಈ ಕಾರವೂ, ಮತ್ತು ಉ ಊ ಕಾರಗಳಿಗೆ ಉ ಊ ಕಾರಗಳು ಬಂದಾಗ ಊ ಕಾರವೂ, ಋ ಕಾರಕ್ಕೆ ಋ ಕಾರವು ಬಂದಾಗ ದೀರ್ಘ ಋ ಕಾರವು ಹಾಗೂ ಲೃ ಕಾರಕ್ಕೆ ಲೃ ಕಾರವು ಬಂದಾಗ ದೀರ್ಘ ಲೃ ಕಾರವು ಬರುವುದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುತ್ತಾರೆ.. ಉದಾ : देव आलाय देवालय विद्या आलय = विद्यालय गौरी ईशः = गोरीशः कवि ईश्वर = कवीश्वर बहु उपकारः = बहूपकारः होतृ लृकारः = होतृकारः मातृ ऋणम् = मातृणम् ಇದೇ ಸಂಧಿಯ ಇತರ ಉದಾಹರಣೆ ಪದಗಳು भानूदय सूक्त्ति मंत्रालय दिव्याभरण सूर्यास्त गिरीश गुरूपदेश वधूपदेश ಇತ್ಯಾದಿ

No comments:

Post a Comment