ಇಲ್ಲ ಹುಡುಕಿ

Sunday, 25 September 2011

ಸ್ವರಾಕ್ಷರಗಳು-स्वराक्षरानि

अ आ इ ई उ ऊ ऋ (*)  लृ ए ऐ ओ औ ಗಳು ಒಟ್ಟಿಗೆ ೧೩ ಸ್ವರಾಕ್ಷರಗಳು. ಅವುಗಳಲ್ಲಿअ इ उ ऋ लृ ಗಳು ಹೃಸ್ವ ಸ್ವರಗಳು. ಇನ್ನುಳಿದ ೮ ದೀರ್ಘ ಸ್ವರಗಳು(+1). ಇವುಗಳಲ್ಲಿ ए ऐ ओ औ ಗಳನ್ನು 'ಸಂಯುಕ್ತ ಸ್ವರ' ಗಳೆಂದು(+2) ಕರೆಯುತ್ತಾರೆ.

(*) ದೀರ್ಘ ಋ ಕಾರವು ನನ್ನ ಬರಹದಲ್ಲಿ ಸದ್ಯಕ್ಕೆ ಲಭ್ಯವಿಲ್ಲದಿರುವುದರಿಂದ ಬರೆಯಲಾಗಲಿಲ್ಲ.
(+1) ಬೇರೆ ಬೇರೆ ಸ್ವರಗಳನ್ನು ಉಚ್ಚರಿಸಲು ಬೇಕಾಗುವ ಕಾಲಮಿತಿ ಬೇರೆ ಬೇರೆಯೆಂದು ಪ್ರತಿಯೊಬ್ಬರ ಅನುಭವ. ಇದಕ್ಕನುಗುಣವಾಗಿ ಸ್ವರಗಳನ್ನು ಹ್ರಸ್ವ, ದೀರ್ಘ, ಪ್ಲುತ ಗಳೆಂದು ವಿಂಗಡಿಸಲಾಗಿದೆ.
ಒಂದು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರವನ್ನು ಹ್ರಸ್ವವೆಂದು(अ), ಎರಡು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರಗಳನ್ನು ದೀರ್ಘವೆಂದು(आ) ಹಾಗೂ ಮೂರು ಅಥವಾ ಅದ್ಕಿಂತ ಹೆಚ್ಚು ಮಾತ್ರೆಯ ಕಾಲಮಿತಿ ಬೇಕಾಗುವ ಸ್ವರಗಳನ್ನು ಪ್ಲುತ ಸ್ವರಗಳೆಂದು(आऽ ) ವಿಂಗಡಿಸಲಾಗಿದೆ.

(+2) ಸಂಯುಕ್ತ ಸ್ವರ ಸಂಧ್ಯಾಕ್ಷರ ಎಂದರೆ ಎರಡು ಸ್ವರ ಅಥವಾ ಅಕ್ಷರಗಳು ಕೂಡಿ ಆದ ಸ್ವರ ಅಥವಾ ಅಕ್ಷರ.
ಉದಾಹರಣೆಗೆ, ए= अ+इ(ई), ओ= अ+उ, औ=अ+ओ

No comments:

Post a Comment