ಇಲ್ಲ ಹುಡುಕಿ

Tuesday, 24 January 2012

ಸಂಧಿಗಳು

ಎರಡು ವರ್ಣಗಳು ಪರಸ್ಪರ ಕೂಡಿದಾಗ ಉಂಟಾಗುವ ಬದಲಾವಣೆಗೆ 'ಸಂಧಿ' ಎನ್ನುತ್ತಾರೆ. ಉದಾ: देव+आलयः=देवालयः। ಇಲ್ಲಿ देव ಶಬ್ದದ ಕೊನೆಯ अ ಕಾರ ಮತ್ತು आलयः ಶಬ್ದದ ಮೊದಲನೆಯ आ ಕಾರವು ಪರಸ್ಪರ ಸಂಯೋಗಗೊಂಡು आ ಕಾರವಾಗಿ देवालयः ಎಂದಾಗಿದೆ. ಇಂತಹ ಸಂಧಿಗಳಲ್ಲಿ ಮುಖ್ಯವಾಗಿ ೫ ಬಗೆಗಳಿವೆ. ಅವುಗಳೆಂದರೆ ೧)ಸ್ವರ+ಸ್ವರ-ಅ+ಆ=ದೇವ+ಆಲಯ ೨)ಸ್ವರ+ವ್ಯಂಜನ-ಅ+ನ್=ಶಿವಾಯ+ನಮಃ ೩)ವ್ಯಂಜನ+ಸ್ವರ-ಕ್+ಈ=ವಾಕ್+ಈಶ=ವಾಗೀಶ ೪)ವಿಸರ್ಗ+ಸ್ವರ- : + ಅ=ರಾಮಃ+ಅಪಿ ೫)ವಿಸರ್ಗ+ವ್ಯಂಜನ- : +ಗ್=ರಾಮಃ+ಗುರು ಸಂಧಿಯಾದಾಗ ಯಾವುದೇ ಬದಲಾವಣೆ ಆಗದಿದ್ದರೆ ಅದನ್ನು ವಿಶೇಷವೆಂದು ತಿಳಿಯುವುದಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗುತ್ತವೆಯೋ ಅವುಗಳನ್ನು ಗಮನಿಸಲಾಗುವುದು. ಯಾವುದೇ ಸಂಧಿಯನ್ನು ತಿಳಿಯಲು ನಾವು ೪ ವಿಷಯಗಳನ್ನು ಗಮನಿಸಬೇಕು. ಅವೆಂದರೇ, ೧)ಸಂಧಿ ಕಾರ್ಯ= ಸಂಧಿಯಾದಾಗ ಆಗುವ ಬದಲಾವಣೆಯನ್ನು ಸಂಧಿಕಾರ್ಯ ಎನ್ನುತ್ತಾರೆ. ಇದರಲ್ಲಿ ೪ ವಿದಗಳಿವೆ. a)ಲೋಪ=ಸಂಧಿಯಾದಾಗ ಒಂದು ಅಕ್ಷರ ಕಾಣೆಯಾಗುವಿಕೆ. b)ಆಗಮ=ಸಂಧಿಯಾಗುವಾಗ ಒಂದು ಅಕ್ಷರ ಆಗಮಿಸುವುದು. c)ಆದೇಶ=ಸಂಧಿಯಾದಾಗ ಒಂದು ಅಕ್ಷರ ಹೋಗಿ ಇನ್ನೊಂದು ಅಕ್ಷರ ಬರುವುದು(ಆದೇಶಿಸುವುದು) d)ಏಕಾದೇಶ=ಸಂಧಿಯಾದಾಗ ೨ ಸ್ವರಗಳು ಸೇರಿ ಒಂದು ಸ್ವರವಾಗುವುದು. ೨)ಸಂಧಿ ನಿಯಮ=ಸಂಧಿಯಾದಾಗ ಎಲ್ಲಿ ಬದಲಾವಣೆಗಳು ಆಗುತ್ತವೆಯೆಂದು ತಿಳಿಸುವುದನ್ನು ಸಂಧಿನಿಯಮ ಎನ್ನುವರು. ೩)ಸಂಧಿ ಉದಾಹರಣೆ=ಸಂಧಿ ಎಲ್ಲಿಯಾಗಿದೆಯೆಂದು ಪದಗಳಿಂದ ತೋರಿಸುವುದು. ೪)ಸಂಧಿ ಚಿಹ್ನೆ=ಸಂಧಿಯಾಗಿರುವ ಸ್ಥಳವನ್ನು ಬಿಡಿಸಿ ಬರೆಯುವಾಗ + ಕೂಡಿಸು ಚಿಹ್ನೆಯಿಂದ ಗುರುತಿಸುತ್ತಾರೆ.

No comments:

Post a Comment