ಇಲ್ಲ ಹುಡುಕಿ

Tuesday, 16 August 2011

ಪಾಣಿನಿ ಹಾಗೂ ಮಾಹೇಶ್ವರ ಸೂತ್ರಗಳ ಉತ್ಪತ್ತಿ.

ಸಂಸ್ಕೃತ ಭಾಷೆಗೆ ಬಹಳ ಅಚ್ಚುಗಟ್ಟಾಗಿ ವ್ಯಾಕರಣ ಶಾಸ್ತ್ರವನ್ನು ಬರೆದ ಮಹಾನ್ ವ್ಯಾಕರಣಕಾರನೇ ಪಾಣಿನಿ. ಇವನ ಕಾಲ ಸುಮಾರು ಕ್ರಿ.ಪೂ. ೪೦೦ ಎಂದು ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಈತನ ತಾಯಿ- ದಾಕ್ಷಿ, ಮತ್ತು ತಂದೆ- ಪಾಣಿನ್, ಗುರು - ವರ್ಷ , ಮತ್ತು ಈತನ ಸ್ಥಳ- ಶಾಲಾತುರ್ ಗ್ರಾಮ.

ಹುಟ್ಟಿನಿಂದಲೇ ಮಂಧಬುದ್ಧಿಯವನಾದ ಈತ ತನ್ನ ಗುರುವಿನಿಂದ ಅನೇಕ ವರ್ಷ ವಿದ್ಯಾಭ್ಯಾಸವನ್ನು ಕಲಿತರೂ ಅವನಿಗೆ ಯಾವುದೇ ರೀತಿಯ ವಿದ್ಯಾಭ್ಯಾಸವು ತಲೆಗೆ ಹತ್ತಲಿಲ್ಲ. ತಾನು ಕಲಿಯಬೇಕು, ನಾನೊಬ್ಬ ಜ್ಞಾನಿಯಾಗಬೇಕು ಎಂಬ ಆಸೆಯನ್ನು ಹೊಂದಿ ಹೇಗೆ ಅಭ್ಯಾಸ ಮಾಡಿದರೂ ಅದು ನಿಷ್ಪ್ರಯೋಜಕವಾಯಿತು. ಇದನ್ನರಿತ ಗುರುಗಳು ಅವನನ್ನು ತಪಸ್ಸನ್ನಾಚರಿಸಲು ಹಿಮಾಲಯ ಪರ್ವತಕ್ಕೆ ಕಳುಹಿಸಿದರು. ಅಂತೆಯೇ ಗುರುಗಳ ಮಾತನ್ನು ಅನುಸರಿಸಿ ಅನೇಕ ಸಮಯ ತಪಸ್ಸನ್ನಾಚರಿಸಿದ. ಆತನ ತಪಸ್ಸಿಗೊಲಿದ ಮಹೇಶ್ವರನು ಕಾರಣ ಏನೆಂದು ಕೇಳಿದಾಗ "ನಾನು ನನ್ನ ಗುರುಗಳೊಡನೆ ಅನೇಕ ವರ್ಷ ವಿದ್ಯಾಭ್ಯಾಸವನ್ನು ಕಲಿತರೂ ಅದು ನನಗೆ ಪ್ರಯೋಜನವಾಗುತ್ತಿಲ್ಲ(ಅರ್ಥವಾಗುತ್ತಿಲ್ಲ). ಆದ್ದರಿಂದ ನನಗೆ ಜ್ಞಾನವನ್ನು ಅನುಗ್ರಹಿಸು" ಎಂದು ಭಿನ್ನವಿಸಿಕೊಂಡ. ಅದಕ್ಕೆ ಸಂತೋಷಗೊಂಡ ಪರಮೇಶ್ವರನು ತಾಂಡವ ನೃತ್ಯವನ್ನು ಮಾಡಿ ಕೊನೆಗೆ (೯+೫) ೧೪ ಸಲ ತನ್ನ ಡಮರುಗವನ್ನು ಭಾರಿಸಿದಾಗ ಅವುಗಳು ೧೪ ಶಬ್ದಗಳಾಗಿ ಪಾಣಿನಿಗೆ ಕೇಳಿಬಂತು. ಅದನ್ನು ಬರೆದುಕೊಂಡ ಪಾಣಿನಿಗೆ ಪರಮೇಶ್ವರನು' ನಿನಗೆ ಜ್ಞಾನವನ್ನು ಕರಣಿಸಿದ್ದೇನೆ ಆದ್ದರಿಂದ ಈಗಲೇ ತೆರಳಿ ಸಂಸ್ಕೃತ ಭಾಷೆಗೆ ಹೊಸದೊಂದು ವ್ಯಾಕರಣವನ್ನು ರಚಿಸಿ ವಿಶ್ವಕ್ಕೆ ಒಬ್ಬ ಮಹಾಜ್ಞಾನಿಯಾಗು ಎಂದು ಅನುಗ್ರಹಿಸಿದನು. ಮಹೇಶ್ವರನ ಆಜ್ಞೆಯಂತೆ ತೆರಳಿದ ಪಾಣಿನಿ ತನ್ನ ವಿಶೇಷ ಬುದ್ಧಿಶಕ್ತಿಯಿಂದ ೧೪ ಶಬ್ದಗಳನ್ನು(ಮೇಲಿನ ಹೇಳಿಕೆಯಂತೆ) ಆಧಾರವನ್ನಾಗಿರಿಸಿಕೊಂಡು ೧೮ ಅದ್ಯಾಯಗಳನ್ನು ಒಳಗೊಂಡ 'ಅಷ್ಟಾದ್ಯಾಯಿ' ಎಂಬ ಹೊಸದೊಂದು ಸಂಸ್ಕೃತ ವ್ಯಾಕರಣವನ್ನೇ ಬರೆದು ವಿಶ್ವಜ್ಞಾನಿಯಾದ. ಈ ವ್ಯಾಕರಣವನ್ನು 'ಲಘುಸಿದ್ಧಾಂತ ಕೌಮುದಿ' ಎಂದು ಯಥೇಚ್ಛವಾಗಿ ಕರೆಯುತ್ತಾರೆ.
ಆ ೧೪ ಸ್ವರಗಳು ಮಹೇಶ್ವರನಿಂದ ಪ್ರಾಪ್ತವಾದದ್ದರಿಂದ ಅದನ್ನು'ಮಾಹೇಶ್ವರ ಸೂತ್ರಗಳು' ಎಂದು ಪಾಣಿನಿ ಹೆಸರಿಸಿದ್ದಾನೆ. ಈ ಸೂತ್ರಗಳೆ ಸಂಸ್ಕೃತ ವ್ಯಾಕರಣದ ಅಡಿಪಾಯವಾಗಿದೆ.

1 comment: