ನೃತ್ತಾವಸಾನೇ ನಟರಾಜರಾಜಃ
ನನಾದ ಢಕ್ಕಂ ನವಪಂಚವಾರಂ।
ಉದ್ಧರ್ತುಕಾಮಃ ಸನಕಾದಿ ಸಿದ್ಧಾನ್
ಏತದ್ವಿಮರ್ಶೆ ಶಿವಸೂತ್ರಜಾಲಂ॥
ಭಗವಾನ್ ಶಿವನು ತನ್ನ ತಾಂಡವ ನೃತ್ಯದ ಕೊನೆಯಲ್ಲಿ 14 ಬಾರಿ ತನ್ನ ಢಮರುಗದ ನಾದವನ್ನು ಮಾಡಿದನು. ಅವುಗಳನ್ನು ಸನಾಕಾದಿ ಋಷಿಗಳು ಅಕ್ಷರ ರೂಪದಲ್ಲಿ ಕಂಡುಹಿದರು. ಇವುಗಳನ್ನು ಮಾಹೇಶ್ವರ ಸೂತ್ರಗಳು ಎಂದು ಕರೆಯಲಾಗಿದೆ.
ಅವುಗಳನ್ನು ಈ ಕೆಳಗೆ ಸೂಚಿಸಲಾಗಿದೆ.
1) अ इ उ ण्
2) ऋ लृ क्
3) ए ओ ङ्
4) ऐ औ च्
5) ह य व र ट्
6) ल ण्
7) ञ म ङ ण न म्
8) झ भ ञ्
9) घ ढ ध ष्
10) ज ब ग ड द ष्
11) ख फ छ ठ थ च ट त व्
12) क प य्
13) श ष स र्
14) ह ल्
ಈ ಪ್ರತೀ ಸೂತ್ರದ ಕೊನೆಯ ವರ್ಣವನ್ನು ವ್ಯಾಕರಣ ಶಾಸ್ತ್ರದಲ್ಲಿ 'इत्' ಎಂದು ಉಪಯೋಗಿಸಿದ್ದಾರೆ.ಈ ಮಾಹೇಶ್ವರ ಸೂತ್ರಗಳೇ ವ್ಯಾಕರಣ ಶಾಸ್ತ್ರದ ಅಡಿಪಾಯವಾಗಿದೆ. ಮುಂದೆ ಪತಂಜಲಿ, ವರರುಚಿ ಮುಂತಾದವರು ಸಂಸ್ಕೃತ ವ್ಯಾಕರಣಕ್ಕೆ ಜಗತ್ತಿನಲ್ಲಿಯೇ ಗೌರವ ಬರುವಂತಾಗಲು ಕಾರಣರಾಗಿದ್ದಾರೆ.
No comments:
Post a Comment