Saturday, 6 August 2011
ಬರೆಯುವ ಮೊದಲು
ನನಗೆ ಸಂಸ್ಕೃತ ಭಾಷೆಯನ್ನು ಕಲಿಯಬೇಕು ಎಂದು ಅನಿಸಿದ್ದು ೨೪/೦೮/೨೦೦೮ ರಂದು ನಡೆದ ನನ್ನ ಲಿಂಗಧೀಕ್ಷೆಯ ನಂತರ. ಅಂದಿನಿಂದ ದಿನನಿತ್ಯ ಸಂಪ್ರದಾಯದಂತೆ ಶಿವಪೂಜೆಯನ್ನು ಕೈಗೊಂಡಿದ್ದರಿಂದ ಸಂಸ್ಕೃತ ಶ್ಲೋಕಗಳು ಅಡೆತಡೆಯಾಗಿ ಕಂಡುಬಂದು ಸಂಸ್ಕೃತ ಭಾಷೆಯನ್ನು ಕಲಿಯಬೇಕು ಎನ್ನುವ ಬಯಕೆ ನನ್ನ ಅಂತರಾಳದಿಂದ ಮೂಡಿಬಂತು. ಆದರೆ ಸಂಸ್ಕೃತ ಭಾಷೆಯನ್ನು ಹೇಗೆ ಕಲಿಯುವುದು ಎಂಬುವುದು ಪ್ರಶ್ನಾತೀತವಾಗಿಯೇ ಉಳಿಯಿತು, ಹೀಗೆ ಒಂದು ದಿನ ದ್ವಿತೀಯ ಪಿಯುಸಿ ಯಲ್ಲಿ ಇರುವಾಗ ನನ್ನ ಗೆಳೆಯ ಪ್ರವೀಣ್ ಜಿ ಯ ಕೈಯಲ್ಲಿ ಸಂಸ್ಕೃತ ಸಂಭಾಷಣ ಮತ್ತು ಸಂಸ್ಕೃತ ಭಾರತಿ ಎಂಬ ಪುಸ್ತಕವನ್ನು ಕಂಡು ಅವನಲ್ಲಿ ಕೇಳಿ ಪಡೆದು ಓದಿ ನೋಡಿದೆ, ತುಂಬಾ ಚೆನ್ನಾಗಿ ಅರ್ಥವಾಗುತಿತ್ತು. ಅದೇ ಸಮಯದಲ್ಲಿ ಮೊಬೈಲ್ ಇಂಟರ್ನೆಟ್ ನ ಬಗ್ಗೆ ಒಬ್ಬ ೮ನೇ ತರಗತಿಯ ಹುಡುಗನಿಂದ ಮಾಹಿತಿ ದೊರಕಿತು; ಅದೂ ದೊರಕಿದ್ದು ಹೀಗೆ, ಆಗ ನಾನು ೨೬೨೬ ನೋಕಿಯ ಮೊಬೈಲ್ ಉಪಯೋಗಿಸುತ್ತಿದ್ದೆ. ಒಂದು ದಿವಸ ಕಾಲೇಜಿನಲ್ಲಿ(ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ನಡ) ಏನೋ ಕಾರ್ಯಕ್ರಮದ ನಿಮಿತ್ತ ಮೊಬೈಲ್ ತಗೊಂಡೊಗಿದ್ದೆ ಆಗ ಆ ಹುಡುಗ ಬಂದು ನನ್ನ ಮೊಬೈಲ್ ತಗೊಂಡು ಇದರಲ್ಲಿ ಫೊಟೋ ನೋಡ್ಲಿಕ್ಕೆ ಆಗ್ತದೆ ಎಂದು ವೆಬ್ ಪೇಜ್ ಗೆ ಹೋಗಿ ಫೊಟೋಗಳನ್ನು ತೋರಿಸಿದ, ಅಲ್ಲಿ ಬಾಲಿವುಡ್ ಎಂದು ಬರೆದು ಅರ್ದಾಂಗಿಯ ಹುಡುಗಿಯರ ಫೊಟೋಗಳು ಮಾತ್ರ ಇತ್ತು ಅದ್ಕಿಂತ ಮೇಲೆ ನೋಡಿದಾಗ enhanced by google ಎಂದು ನೋಡಿದೆ. ಗೂಗ್ಲ್ ಎಂಬುವುದರ ಬಗ್ಗೆ ನನಗೆ ೮ನೇ ತರಗತಿಯಲ್ಲಿ SDMಕಾಲೇಜಿನಲ್ಲಿ ಇದ್ದ ಕಂಪ್ಯೂಟರ್ ಇಂಟರ್ನೆಟ್ ತರಬೇತಿಯಲ್ಲಿಪರಿಚಯ ಆಗಿತ್ತು. ಆದ್ರಿಂದ ಇದು ಇಂಟರ್ನೆಟ್ ಆಗಿರ್ಬೇಕು ಎಂದು www.google.com ಎಂದು ಬರೆದು search ಕೊಟ್ಟಾಗ ತರಬೇತಿಯಲ್ಲಿ ಕಂಡ ಗೂಗ್ಲ್ ಪೇಜ್ ತೆರೆಯಿತು. ಆನಂತರ ಇಂಟರ್ನೆಟ್ ನ ಬಳಕೆ ನನ್ನಲ್ಲಿ ಆರಂಭವಾಯಿತು,ಆದರೆ ಆ ವ್ಯಕ್ತಿಗೆ ಅದು ಇಂಟರ್ನೆಟ್ ಎಂದು ಗೊತ್ತೇ ಇರಲಿಲ್ಲ.ಆನಂತರ ಅದರಲ್ಲಿ ಸಸ್ಕೃತದ ಬಗ್ಗೆ ಕೆಲವೊಂದನ್ನು ಓದುತ್ತಿದ್ದೆ.ಆದರೂ ಸಂಸ್ಕೃತ ಗುರುವಿನ ಅಗತ್ಯತೆ ನನಗೆ ಅಗತ್ಯ ಎಂದೆನಿಸಿತು. ಆದರೆ ಸಂಸ್ಕೃತ ಬಲ್ಲವರು ಯಾರೂ ಸಿಗಲಿಲ್ಲ, ನಂತರ ಕಾಲೇಜು ಮುಗಿದು ಪದವಿಗೆ ಸೇರಲು ಹೋದಾಗ ಅಲ್ಲಿ ಸಂಸ್ಕೃತ ಸಾಹಿತ್ಯ ಎಂಬ ವಿಷಯವನ್ನು ಕಾಂಬಿನೇಷನ್ ಪಟ್ಟಿಯಲ್ಲಿ ನೋಡಿದೆ ಆದರೆ ರಾಜ್ಯಶಾಸ್ತ್ರ ನನ್ನ ನೆಚ್ಚಿನ ವಿಷಯ ಆಗಿತ್ತು ನನ್ನ ಮುಂದಿನ ಗುರಿಯು LLB ಮಾಡುವುದಾಗಿತ್ತು. ಆದ್ರಿಂದ ನೇರವಾಗಿ ಅಲ್ಲಿದ್ದ ಲೆಕ್ಚರ್ ರಲ್ಲಿ ಈಗ ಸಂಸ್ಕೃತ ಸಾಹಿತ್ಯ ತಗೊಂಡ್ರೆ ಮುಂದೆ LLB ಗೆ ಏನಾದ್ರೂ ತೊಂದರೆ ಆದೀತ ಎಂದು ಕೇಳಿದಾಗ ಪರವಾಗಿಲ್ಲ ಎಂದ್ರು. ಆಗ ನನ್ನ ಒಟ್ಟು ವಿಷಯಗಳಲ್ಲಿ ಸಂಸ್ಕೃತ ಸಾಹಿತ್ಯವೊಂದನ್ನೂ ಆಯ್ಕೆ ಮಾಡಿಕೊಂಡೆ. ಹೀಗೆ ನನಗೆ ಮುಂದಕ್ಕೆ ಸಂಸ್ಕೃತ ಗುರುಗಳಾಗಿ ದೊರಕಿದ್ದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಸಂಸ್ಕೃತ ಪ್ರೊಫೇಸರ್ ಡಾ. ಇ ಮಹಾಬಲ ಭಟ್ಟ್ , ಡಾ. ಶ್ರೀಧರ್ ಎನ್ ಭಟ್ಟ್ ಮತ್ತು ಮಹೇಶ್ ರವರುಗಳು. ನನಗೆ ಸಂಸ್ಕೃತವನ್ನು ಬೋಧಿಸಿದ ಹಾಗೂ ಬೋಧಿಸುತ್ತಿರುವ ಇವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ. ಹಾಗೂ ನಾನು ಕಲಿತ ವಿಧ್ಯೆಯು ನನಿಗೆ ಮಾತ್ರ ಸೀಮಿತವಾಗಿರದೆ ಅದು ನಾಡಿನ ಎಲ್ಲಾ ಜನಸಾಮನ್ಯರಿಗೂ ಕೂಡಾ ಉಪಯೋಗವಾಗಬೇಕು ಎಂದು ಬಯಸುತ್ತಾ ಹಾಗೂ ಎಲ್ಲಾ ಸಂಸ್ಕೃತ ವಿದ್ಯಾರ್ಥಿ(ಅಭಿಮಾನಿ)ಗಳಿಗೂ ಸದಾ ಸ್ವಾಗತವನ್ನು ಬಯಸುತ್ತಾ ನನ್ನ ಈ ಬ್ಲಾಗ್ ನಲ್ಲಿ ಜನಸಾಮನ್ಯರಿಗೆಲ್ರಿಗೂ ಸರಳವಾಗಿ ಅರ್ಥವಾಗುವಂತೆ ಸಂಸ್ಕೃತ ವ್ಯಾಕರಣವನ್ನು ಬರೆಯಲಾರಂಭಿಸುತ್ತೇನೆ. ಪ್ರಿಯಾ ಬಂಧುಮಿತ್ರರೆ ದಯವಿಟ್ಟು ನನ್ನೊಂದಿಗೆ ನಿಮ್ಮ ಅನಿಸಿಕೆಗಳು, ಸಹಕಾರಗಳು ಎಂದಿಗೂ ಇರಲಿ ಹಾಗೂ ಏನಾದರೂ ನಿಮಗನಿಸಿದ್ದನ್ನು ಇದರಲ್ಲಿ ಸೇರಿಸಬೇಕೆಂದಿದ್ದಲ್ಲಿ praveenbk.lingayat@gmail.comಗೆ ಇ-ಮೇಲ್ ಮಾಡಿ ಇಲ್ಲವೇ ನನ್ನ9743112520 ನಂಬರ್ ಗೆ ಕರೆಮಾಡಿ ತಿಳಿಸಿ.
Subscribe to:
Post Comments (Atom)
No comments:
Post a Comment